Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಮೋದಿ ಕ್ಯಾಬಿನೆಟ್ ನಲ್ಲಿ ಹೊಸದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ಸೇರ್ಪಡೆಯಾಗಿರುವ ಅಶ್ವಿನಿ ವೈಷ್ಣವ್ ಟ್ವಿಟರ್ ಗೆ ಖಡಕ್ ಸಂದೇಶ ಕೊಟ್ಟಿದ್ದಾರೆ.
ಇದಕ್ಕೂ ಮೊದಲು ಇದ್ದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮತ್ತು ಟ್ವಿಟರ್ ನಡುವಿನ ತಿಕ್ಕಾಟ ಆಗಾಗ ನಡೆಯುತ್ತಲೇ ಇತ್ತು. ಕೇಂದ್ರದ ಹೊಸ ಐಟಿ ನಿಯಮಗಳನ್ನು ಒಪ್ಪದ ಟ್ವಿಟರ್ ವಿರುದ್ಧ ಸಚಿವರು ಕೆಂಡ ಕಾರುತ್ತಲೇ ಇದ್ದರು.
ಇದೀಗ ಹೊಸದಾಗಿ ಅಧಿಕಾರ ಸ್ವೀಕರಿಸಿದ ಸಚಿವ ಅಶ್ವಿನಿ ವೈಷ್ಣವ್ ಕೂಡಾ ಅದೇ ಮಾತನಾಡಿದ್ದಾರೆ. ಭಾರತದಲ್ಲಿ ಕೆಲಸ ಮಾಡುವ ಯಾವುದೇ ಸಂಸ್ಥೆಯಾದರೂ ಇಲ್ಲಿನ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ಖಡಕ್ ಸಂದೇಶ ಕೊಟ್ಟಿದ್ದಾರೆ.