ನವದೆಹಲಿ: ಆನ್ ಲೈನ್ ಫುಡ್ ಡೆಲಿವರಿ ಮಾಡುವಾಗ ಹಲವು ಬಾರಿ ಎಡವಟ್ಟುಗಳಾಗುವ ಅನೇಕ ಉದಾಹರಣೆ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಘಟನೆ ವರದಿಯಾಗಿದೆ.
ಆನ್ ಲೈನ್ ಫುಡ್ ಡೆಲಿವರಿ ಆಪ್ ಮೂಲಕ ವ್ಯಕ್ತಿಯೊಬ್ಬ ಮಿಲ್ಕ್ ಶೇಕ್ ಗೆ ಆರ್ಡರ್ ಮಾಡಿದ್ದ. ಆದರೆ ಆತನಿಗೆ ಸಿಕ್ಕಿದ್ದು ಮೂತ್ರ! ಒಂದು ಸಿಪ್ ಕುಡಿದ ಮೇಲೆ ಯಾಕೋ ರುಚಿ ವ್ಯತ್ಯಾಸವಾಗಿರುವುದನ್ನು ಗಮನಿಸಿದ ವ್ಯಕ್ತಿಗೆ ಕಪ್ ನಲ್ಲಿರುವುದು ಮಾನವನ ಮೂತ್ರ ಎಂದು ತಿಳಿದುಬಂದಿದೆ.
ಗಾಬರಿಗೊಂಡ ಆತ ತಕ್ಷಣವೇ ಕಂಪನಿಗೆ ದೂರು ನೀಡಿದ್ದಾನೆ. ಜೊತೆಗೆ ಆರ್ಡರ್ ತಂದುಕೊಟ್ಟ ಡ್ರೈವರ್ ಗೆ ಕರೆ ಮಾಡಿದಾಗ ಇದು ಆತನ ತಪ್ಪಿನಿಂದಲೇ ಆದ ಕೃತ್ಯ ಎಂಬುದು ಬೆಳಕಿಗೆ ಬಂದಿದೆ. ಕೆಲಸದ ನಡುವೆ ದೇಹಬಾಧೆಯಾದಾಗ ಕಪ್ ನಲ್ಲಿ ಮೂತ್ರಿಸುವ ಅಭ್ಯಾಸವಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಈ ಬಾರಿ ಮಿಲ್ಕ್ ಶೇಕ್ ಮತ್ತು ಮೂತ್ರದ ಕಪ್ ಕನ್ ಫ್ಯೂಸ್ ಆಗಿ ಈ ಎಡವಟ್ಟಾಗಿದೆ. ಇದೀಗ ಗ್ರಾಹಕನಿಗೆ ಕಂಪನಿ ಹಣ ಪರಿಹಾರ ನೀಡಿದ್ದು, ಆ ಡ್ರೈವರ್ ನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.