Select Your Language

Notifications

webdunia
webdunia
webdunia
webdunia

ಎಸ್‌ಡಿಪಿಐ ಅಧ್ಯಕ್ಷ ಫೈಜಿ ಬಂಧನ ಬೆನ್ನಲ್ಲೇ ಕಚೇರಿಗಳನ್ನು ಜಾಲಾಡಿದ ಇಡಿ ಅಧಿಕಾರಿಗಳು

Enforcement Directorate Attack

Sampriya

ನವದೆಹಲಿ , ಗುರುವಾರ, 6 ಮಾರ್ಚ್ 2025 (14:07 IST)
Photo Courtesy X
ನವದೆಹಲಿ:  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಅವರ ಬಂಧನದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ಎಸ್‌ಡಿಪಿಐ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ.

ನಿಷೇಧಿತಪಿಎಫ್‌ಐ ನಂಟು ಹೊಂದಿರುವ ಎಸ್‌ಡಿಪಿಐ ವಿರುದ್ದ ಇರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ 12ಕ್ಕೂ ಅಧಿಕ ಕಡೆಗಳಲ್ಲಿ ಇಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ಉಗ್ರ  ಚಟುವಟಿಕೆ ಸೇರಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿತ್ತು. 2009ರಲ್ಲಿ ಎಸ್‌ಡಿಪಿಐ ಸ್ಥಾಪನೆಯಾಗಿತ್ತು. ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಪಿಎಫ್‌ಐನ ರಾಜಕೀಯ ಪಕ್ಷ ಎಂದು ಹೇಳಲಾಗುತ್ತದೆ.

ದೆಹಲಿಯ ಎರಡು ಕಡೆಗಳಲ್ಲಿ ಹಾಗೂ ಕೇರಳದ ತಿರುವನಂತಪುರ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್‌ನ ಪಾಕುರ್, ಮಹಾರಾಷ್ಟ್ರದ ಠಾಣೆ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಲಖನೌ ಮತ್ತು ಜೈಪುರದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರಿಗೆ ನಿದ್ರೆ ಮಾಡುವ ಚೇರ್ ದುಡ್ಡು ಕೊಡದೇ ತಂದಿದ್ದು: ಸ್ಪೀಕರ್ ಯುಟಿ ಖಾದರ್