Select Your Language

Notifications

webdunia
webdunia
webdunia
webdunia

ಹಿಂದಿ ಹೇರಿಕೆ ವಿರುದ್ಧ ಪ್ರತಿಜ್ಞೆ ಮಾಡುವಾಗ ಮೆತ್ತಗೆ ಮಹಿಳೆಯ ಬಳೆ ಎಗರಿಸಲು ನೋಡುವ ಡಿಎಂಕೆ ಕಾರ್ಯಕರ್ತ: ವಿಡಿಯೋ

DMK Leader stealing

Krishnaveni K

ಚೆನ್ನೈ , ಬುಧವಾರ, 5 ಮಾರ್ಚ್ 2025 (11:34 IST)
ಚೆನ್ನೈ: ತಮಿಳುನಾಡಿನಲ್ಲಿ ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ನಾಯಕರ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ಆದರೆ ಪ್ರತಿಭಟನೆ ವೇಳೆ ಡಿಎಂಕೆ ಕಾರ್ಯಕರ್ತನೊಬ್ಬ ಪಕ್ಕದಲ್ಲಿರುವ ಮಹಿಳೆಯ ಚಿನ್ನದ ಬಳೆ ಕದಿಯಲು ಯತ್ನಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎಂಕೆ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ನಾಯಕರು ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಸದ್ದಡಗಿಸಿ, ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಪ್ರತಿಭಟನೆ ನಡೆಸುತ್ತಿವೆ. ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲು ಬಿಡಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ.

ಇದರ ನಡುವೆ ಡಿಎಂಕೆ ನಾಯಕರು ಕೇಂದ್ರದ ಹಿಂದಿ ಹೇರಿಕೆ ವಿರೋಧಿಸಿ ಪ್ರತಿಜ್ಞಾ ವಿಧಿ ಬೋಧಿಸಿ ಪ್ರತಿಭಟನೆ ಮಾಡುತ್ತಿದ್ದರು. ಪ್ರತಿಜ್ಞಾ ವಿಧಿ ಹೇಳಲು ಕೈ ಮುಂದೆ ಚಾಚಿದ್ದರು. ಈ ವೇಳೆ ಡಿಎಂಕೆ ಕಾರ್ಯಕರ್ತ, ಡಿಎಂಕೆ ಕೌನ್ಸಲರ್ ಝಾಕಿರ್ ಹುಸೈನ್ ಎಂಬಾತ ಪಕ್ಕದಲ್ಲೇ ಕೈ ಮುಂದೆ ಚಾಚಿ ನಿಂತಿದ್ದ ಮಹಿಳೆಯ ಬಳೆಗೇ ಕೈ ಹಾಕುತ್ತಾನೆ.

ಮೆತ್ತಗೆ ಬಳೆಯನ್ನು ಜಾರಿಸಿ ಕದಿಯಲು ಯತ್ನಿಸುತ್ತಾನೆ. ಆದರೆ ತಕ್ಷಣವೇ ಮಹಿಳೆ ಕೈ ಹಿಂಪಡೆಯುತ್ತಾಳೆ. ಈ ವಿಡಿಯೋವನ್ನು ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಹಂಚಿಕೊಂಡಿದ್ದು, ಡಿಎಂಕೆ ನಾಯಕರು ಎಂಥಾ ಕಳ್ಳರು ನೋಡಿ ಎಂದು ಬರೆದುಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಹಗರಣದ ಬಗ್ಗೆ ಕಾಂಗ್ರೆಸ್ಸಿಗರೇ ಕೊಟ್ಟಿದ್ರು ದಾಖಲೆ: ಸ್ನೇಹಮಯಿ ಕೃಷ್ಣ ಬಾಂಬ್