Select Your Language

Notifications

webdunia
webdunia
webdunia
webdunia

ಸಾವರ್ಕರ್ ಕುರಿತು ಹೇಳಿಕೆ: ವಿಚಾರಣೆಗೆ ಗೈರಾದ ರಾಹುಲ್‌ ಗಾಂಧಿಗೆ ಬಿತ್ತು ದಂಡ, ಎಷ್ಟು ಗೊತ್ತಾ

ಸಾವರ್ಕರ್ ಕುರಿತು ಹೇಳಿಕೆ: ವಿಚಾರಣೆಗೆ ಗೈರಾದ ರಾಹುಲ್‌ ಗಾಂಧಿಗೆ ಬಿತ್ತು ದಂಡ, ಎಷ್ಟು ಗೊತ್ತಾ

Sampriya

ಲಕ್ನೋ , ಬುಧವಾರ, 5 ಮಾರ್ಚ್ 2025 (19:10 IST)
Photo Courtesy X
ಲಕ್ನೋ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧದ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗಿದ್ದಕ್ಕಾಗಿ ಲಕ್ನೋ ಕೋರ್ಟ್‌ ಅವರಿಗೆ ₹200 ದಂಡ ವಿಧಿಸಿದೆ.

 2022 ರಲ್ಲಿ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ವಿರುದ್ಧ ಹೇಳಿಕೆಗೆ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ದೂರುದಾರರ ವಕೀಲರಿಗೆ ಹಣವನ್ನು ನೀಡುವಂತೆ ಸೂಚಿಸಿದೆ.

ರಾಹುಲ್ ಸಾವರ್ಕರ್ ಅವರನ್ನು ‘ಬ್ರಿಟಿಷರ ಸೇವಕ’ ಎಂದು ಕರೆದಿದ್ದಾರೆ ಎಂದು ದೂರುದಾರ ನೃಪೇಂದ್ರ ಪಾಂಡೆ ಪರ ವಕೀಲರು ಹೇಳಿದ್ದಾರೆ.  ರಾಹುಲ್ ಪತ್ರಿಕಾಗೋಷ್ಠಿಗೂ ಮುನ್ನ ಸಾವರ್ಕರ್ ಅವರನ್ನು ಕೀಳಾಗಿ ಹೇಳುವ ಕರಪತ್ರಗಳನ್ನು ಹಂಚಲಾಗಿತ್ತು ಎಂದು ಅವರು ಹೇಳಿದ್ದಾರೆ.

ರಾಹುಲ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ರಾಹುಲ್ ವಿರುದ್ಧ ದ್ವೇಷ ಹರಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಸಂಸತ್ತಿನ ನಡೆಯುತ್ತಿರುವ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರು ನಿರತರಾಗಿದ್ದಾರೆ ಮತ್ತು ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಹುಲ್ ಪರ ವಕೀಲರು ತಿಳಿಸಿದ್ದಾರೆ.

ಈ ಪ್ರಕರಣದ ಮುಂದಿನ ವಿಚಾರಣೆಯ ದಿನಾಂಕವನ್ನು ಏಪ್ರಿಲ್ 14 ಎಂದು ನ್ಯಾಯಾಲಯ ನಿಗದಿಪಡಿಸಿದೆ ಮತ್ತು ಕಾಂಗ್ರೆಸ್ ನಾಯಕನ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಬಗ್ಗೆ ಟೀಕೆ ಮಾಡಿದ್ದ ಶಮಾ ಮೊಹಮ್ಮದ್ ಕೊಹ್ಲಿ ಬಗ್ಗೆ ಮೆಚ್ಚುಗೆ