ನವದೆಹಲಿ: ದೆಹಲಿಯ ಬಜೆಟ್ ಜನರ ನಿರೀಕ್ಷೆಗಳನ್ನು ಪೂರೈಸುತ್ತದೆ. ಇದಕ್ಕಾಗಿ ನಾನು ಸ್ವತಃ ಮಹಿಳೆಯರ ಜತೆ, ಕುಟುಂಬಗಳು, ಯುವಕರು ಮತ್ತು ವಿವಿಧ ವಲಯಗಳ ವೃತ್ತಿಪರರನ್ನು ಭೇಟಿಯಾಗಲಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ರೇಖಾ ಗುಪ್ತಾ, "ನಾನು ಸ್ಲಂ ಪ್ರದೇಶಗಳಲ್ಲಿನ ಸಹೋದರಿಯರು ಮತ್ತು ಕುಟುಂಬಗಳನ್ನು ಭೇಟಿ ಮಾಡುತ್ತೇನೆ, ಈ ಸರ್ಕಾರದಿಂದ ಅವರಿಗಿರುವ ನಿರೀಕ್ಷೆಗಳ ಬಗ್ಗೆ ನಾನು ಅವರೊಂದಿಗೆ ಮಾತನಾಡುತ್ತೇನೆ. ವಿವಿಧ ವಲಯಗಳ ಯುವಕರು ಮತ್ತು ವೃತ್ತಿಪರರೊಂದಿಗೆ ಚರ್ಚೆ ನಡೆಸಲಾಗುವುದು. ದೆಹಲಿಯ ಬಜೆಟ್ ಜನರ ನಿರೀಕ್ಷೆಗಳನ್ನು ಈಡೇರಿಸುತ್ತದೆ" ಎಂದರು.
ಮುಖ್ಯಮಂತ್ರಿಗಳು ಪ್ರತಿಪಕ್ಷ ಆಮ್ ಆದ್ಮಿ ಪಕ್ಷ (ಎಎಪಿ) ವಿರುದ್ಧ ವಾಗ್ದಾಳಿ ನಡೆಸಿದ ಅವರು ಅಜೆಂಡಾವನ್ನು ಯಾರೂ ಸರ್ಕಾರಕ್ಕೆ ನೆನಪಿಸಬೇಕಾಗಿಲ್ಲ ಎಂದು ಹೇಳಿದರು.
"ಎಲ್ಲಾ ಮಹಿಳೆಯರಿಗೆ 2,100 ರೂ. ಅಥವಾ ಸಿಲಿಂಡರ್ ಯೋಜನೆಯಾಗಿದ್ದರೂ ನಾವು ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಎಲ್ಲಾ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ನಮ್ಮ ಅಜೆಂಡಾ ಮುಂದುವರಿಯುತ್ತದೆ, ಅವರ (ಎಎಪಿ) ಅಲ್ಲ" ಎಂದು ಸಿಎಂ ಗುಪ್ತಾ ಹೇಳಿದರು.