Publish Date: Thu, 11 Nov 2021 (09:10 IST)
Updated Date: Thu, 11 Nov 2021 (09:23 IST)
ನವದೆಹಲಿ: ಕೆಲಸ ಕೊಟ್ಟು, ದುಡಿಯಲು ದಾರಿಯೂ ಕಂಡುಕೊಟ್ಟ ಯಜಮಾನನ ಪತ್ನಿಯನ್ನೇ ಯುವಕನೊಬ್ಬ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ರಾಕೇಶ್ ಗೆ ಸಹಾಯಕ ಪ್ರಾದ್ಯಾಪಕರೊಬ್ಬರು ಮನೆಯಲ್ಲಿ ಇರಲು ಜಾಗ ಕೊಟ್ಟು, ತಮ್ಮದೇ ಕಾರನ್ನು ಓಡಿಸಿ ಬಾಡಿಗೆ ಹಣ ಸಂಪಾದಿಸು ಎಂದು ಸಹಾಯ ಮಾಡಿದ್ದರು.
ಇತ್ತೀಚೆಗೆ ರಾಕೇಶ್ ಗೆ ಆದಾಯ ಅಷ್ಟೊಂದು ಬರುತ್ತಿರಲಿಲ್ಲ. ಇದರಿಂದಾಗಿ ಮನೆ ಬಾಡಿಗೆ ಕಟ್ಟಿರಲಿಲ್ಲ. ಇದಕ್ಕಾಗಿ ಪ್ರಾಧ್ಯಾಪಕರ ಪತ್ನಿ ಆತನನ್ನು ಮನೆಯಿಂದ ಹೊರಹಾಕಿದ್ದರು. ಇದೇ ಸಿಟ್ಟಿನಲ್ಲಿ ಆರೋಪಿ ಆ ಮಹಿಳೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರ ಎದುರು ಶರಣಾಗಿದ್ದಾನೆ.