ಪಣಜಿ: ತನ್ನ ಮೇಲಾದ ಅತ್ಯಾಚಾರದಿಂದ ಮನನೊಂದ ಅಪ್ರಾಪ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋವಾದಲ್ಲಿ ನಡೆದಿದೆ.
16 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಕಾರಿನಲ್ಲಿ ದುರುಳನೊಬ್ಬ ಅತ್ಯಾಚಾರವೆಸಗಿದ್ದ. ಈ ಸಂಬಂಧ 31 ವರ್ಷದ ಆರೋಪಿಯನ್ನು ಬಂಧಿಸಲಾಗಿತ್ತು.
ನೆರೆಮನೆಯವಾಗಿದ್ದ ಕಾರಣಕ್ಕೆ ಆರೋಪಿ ಜೊತೆಗೆ ಬಾಲಕಿಗೆ ಸ್ನೇಹವಿತ್ತು. ಇದೇ ಸ್ನೇಹದಿಂದ ಬಾಲಕಿಯನ್ನು ಕಾರಿನಲ್ಲಿ ಡ್ರೈವ್ ಕರೆದೊಯ್ಯುವುದಾಗಿ ಕರೆದುಕೊಂಡು ಹೋಗಿದ್ದ. ಬಳಿಕ ಹೀನ ಕೃತ್ಯವೆಸಗಿ ಮನೆಯವರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದ. ಇದರಿಂದ ಮನನೊಂದ ಬಾಲಕಿ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದರಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.