ಗುರ್ಗಾಂವ್: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಾಲ್ವರು ದುರಳರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಹೀನಾಯ ಕೃತ್ಯ ನಡೆದಿದೆ.
ಗೆಳತಿಯನ್ನು ಭೇಟಿಯಾಗಲು ಸಂತ್ರಸ್ತ ಯುವತಿ ಜೈಪುರಕ್ಕೆ ಬಂದಿದ್ದಾಗ ಈ ಕೃತ್ಯ ನಡೆದಿದೆ. ಗೆಳತಿಯ ಬಾಯ್ ಫ್ರೆಂಡ್ ನ ಸ್ನೇಹಿತರೇ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಗೆಳತಿಯ ಬಾಯ್ ಫ್ರೆಂಡ್ ಜೊತೆಗೆ ಬಂದಿದ್ದ ಯುವಕರು ಆಕೆಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಕೃತ್ಯವೆಸಗಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.