Publish Date: Wed, 10 Nov 2021 (09:37 IST)
Updated Date: Wed, 10 Nov 2021 (09:38 IST)
ಬೆಂಗಳೂರು: ವಿವಾಹಿತ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಜೊತೆಗೆ ಪ್ರೀತಿಗೆ ಬಿದ್ದು, ಕೊನೆಗೆ ಆಕೆ ಪ್ರಶ್ನೆ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಚೇತನ್ ಎಂಬ 27 ವರ್ಷದ ಯುವಕನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇದೆ. ಕೌಟುಂಬಿಕ ಕಲಹದಿಂದಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಇದೀಗ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಜೊತೆ ಪ್ರೀತಿಗೆ ಬಿದ್ದಿದ್ದ.
ಆದರೆ ಚೇತನ್ ಗೆ ಮದುವೆಯಾದ ವಿಚಾರ ತಿಳಿದ ಯುವತಿ ಪ್ರಶ್ನೆ ಮಾಡಿದ್ದಾಳೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.