Publish Date: Mon, 13 Mar 2023 (10:28 IST)
Updated Date: Mon, 13 Mar 2023 (10:30 IST)
ನವದೆಹಲಿ : ದೇಶಕ್ಕೆ ಅಕ್ರಮ ವಲಸಿಗರ ಪ್ರವೇಶವನ್ನು ತಡೆಯಲು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹೊಸ ನೀತಿಯೊಂದನ್ನು ಘೋಷಿಸಿದ್ದಾರೆ. ನಿಮ್ಮ ದೇಶ ಸುರಕ್ಷಿತವಾಗಿದ್ದರೂ, ಸುರಕ್ಷಿತವಾಗಿರದಿದ್ದರೂ ಸರಿ ಅಕ್ರಮ ವಲಸಿಗರನ್ನು ನಾವು ವಾರದೊಳಗಾಗಿ ಹೊರದಬ್ಬುತ್ತೇವೆ.
ಒಮ್ಮೆ ಹೊರ ಹಾಕಿ ನಿಷೇಧಕ್ಕೊಳಪಟ್ಟ ವ್ಯಕ್ತಿಗಳಿಗೆ ಅಮೆರಿಕ ಮತ್ತು ಅಸ್ಟ್ರೇಲಿಯಾಕ್ಕೆ ಪ್ರವೇಶ ಇರುವುದಿಲ್ಲ ಎಂದಿದ್ದಾರೆ. ಕಳೆದ ವರ್ಷ 45,000 ವಲಸಿಗರು ದೋಣಿಗಳ ಮೂಲಕ ಅತಿಕ್ರಮ ಪ್ರವೇಶ ಮಾಡಿದ್ದಾರೆ. 2018 ರಿಂದ ಪ್ರತಿ ವರ್ಷ 60% ರಷ್ಟು ವಲಸಿಗರ ಪ್ರಮಾಣ ಹೆಚ್ಚಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಿಶಿ ಸುನಕ್ ಅವರ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರ ಗುಂಪುಗಳು ವಿರೋಧ ವ್ಯಕ್ತಪಡಿಸಿವೆ. ಈ ಯೋಜನೆ ಸರಿಯಲ್ಲ. ನಿರಾಶ್ರಿತರ ಮೇಲಿನ ದೌರ್ಜನ್ಯ ಎಂಬ ಟೀಕೆಗಳು ಕೇಳಿ ಬಂದಿವೆ.