ಲಂಡನ್ : ಉಕ್ರೇನ್ಗೆ ಯುದ್ಧ ವಿಮಾನಗಳನ್ನು ಕಳುಹಿಸುತ್ತೇವೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ಹೇಳಿದೆ. ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಬೆನ್ ವ್ಯಾಲೆಸ್ ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.
ಯುದ್ಧ ವಿಮಾಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ನಾವು ಸ್ಪಷ್ಟವಾಗಿದ್ದೇವೆ. `ಯಾವುದನ್ನೂ ಆಳಬೇಡಿ, ಯಾವುದನ್ನೂ ತಳ್ಳಿಹಾಕಬೇಡಿ ಅನ್ನೋದು ಕಳೆದ ವರ್ಷದಲ್ಲಿ ನಾನು ಕಲಿತ ಒಂದು ವಿಷಯ. ರಷ್ಯಾದ ಆಕ್ರಮಣ ಹಿಮ್ಮೆಟ್ಟಿಸಲು ಸಹಾಯ ಮಾಡುವಂತೆ ಅಮೆರಿಕ ನಿರ್ಮಿತ ಎಫ್-16 ಯುದ್ಧ ವಿಮಾನಗಳ ಸಹಾಯ ಕೋರಿದೆ.
ಈ ನಡುವೆ ಅಮೆರಿಕ ಉಕ್ರೇನ್ಗೆ ಎಫ್-16 ಯುದ್ಧವಿಮಾನಗಳ ವಿತರಣೆಯನ್ನು ತಳ್ಳಿಹಾಕಿದೆ. ಆದ್ರೆ ಪೋಲೆಂಡ್ ಸೇರಿದಂತೆ ಇತರ ಮಿತ್ರ ರಾಷ್ಟ್ರಗಳು ಉಕ್ರೇನ್ಗೆ ನೆರವು ನೀಡಲು ಮುಕ್ತವಾಗಿವೆ. ಇದರೊಂದಿಗೆ ಕೇವಲ ಜೆಟ್ಗಳಷ್ಟೇ ಅಲ್ಲ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಪರೀಕ್ಷಿಸಲು ನಾನು ತುಂಬಾ ಮುಕ್ತವಾಗಿದ್ದೇನೆ ಎಂದು ವ್ಯಾಲೆಸ್ ಭರವಸೆ ನೀಡಿದ್ದಾರೆ.