Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ : ರಿಶಿ ಸುನಕ್

ಮಾನವ ಹಕ್ಕುಗಳನ್ನು ಬಳಸಿ ನಮ್ಮಲ್ಲಿ ಇರಲು ಸಾಧ್ಯವಿಲ್ಲ : ರಿಶಿ ಸುನಕ್
ನವದೆಹಲಿ , ಶುಕ್ರವಾರ, 10 ಮಾರ್ಚ್ 2023 (14:21 IST)
ನವದೆಹಲಿ : ದೇಶಕ್ಕೆ ಅಕ್ರಮ ವಲಸಿಗರ ಪ್ರವೇಶವನ್ನು ತಡೆಯಲು ಬ್ರಿಟನ್ ಪ್ರಧಾನಿ ರಿಶಿ ಸುನಕ್ ಹೊಸ ನೀತಿಯೊಂದನ್ನು ಘೋಷಿಸಿದ್ದಾರೆ.
 
ಅಕ್ರಮ ವಲಸಿಗರ ಕುರಿತು, ನೀವು ಇಲ್ಲಿ ಅತಿಕ್ರಮವಾಗಿ ಬಂದು ಉಳಿದುಕೊಳ್ಳಲು, ಮಾನವಹಕ್ಕುಗಳನ್ನು ಬಳಸಿಕೊಂಡು ರಕ್ಷಣೆ ಪಡೆಯುವುದು ಸಾಧ್ಯವಿಲ್ಲ ಎಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ದೇಶದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಅಕ್ರಮ ವಲಸಿಗರನ್ನು ನಾವು ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ನಿಮ್ಮ ದೇಶ ಸುರಕ್ಷಿತವಾಗಿದ್ದರೂ, ಸುರಕ್ಷಿತವಾಗಿರದಿದ್ದರೂ ಸರಿ ಅಕ್ರಮ ವಲಸಿಗರನ್ನು ನಾವು ವಾರದೊಳಗಾಗಿ ಹೊರದಬ್ಬುತ್ತೇವೆ. ಒಮ್ಮೆ ಹೊರ ಹಾಕಿ ನಿಷೇಧಕ್ಕೊಳಪಟ್ಟ ವ್ಯಕ್ತಿಗಳಿಗೆ ಅಮೆರಿಕ ಮತ್ತು ಅಸ್ಟ್ರೇಲಿಯಾಕ್ಕೆ ಪ್ರವೇಶ ಇರುವುದಿಲ್ಲ ಎಂದಿದ್ದಾರೆ.

ಬ್ರಿಟೀಷ್ ಕಾಲುವೆ ಮೂಲಕ ದೋಣಿಗಳಲ್ಲಿ ದೇಶದ ಗಡಿ ನುಸುಳುವ ವಲಸಿಗರ ಮೇಲೆ ಅಕ್ರಮ ವಲಸೆ ಕಾಯ್ದೆಯ ಅಡಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತರ್ಜಾತಿ ವಿವಾಹ- ಸಾಮಾಜಿಕ ಬಹಿಷ್ಕಾರ ಪ್ರಕರಣ?