Publish Date: Fri, 09 Aug 2019 (19:00 IST)
Updated Date: Fri, 09 Aug 2019 (19:02 IST)
ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನೀರಿನಿಂದಾಗಿ ಸಂತ್ರಸ್ಥರಾಗಿರೋ ಜನರಿಗೆ ಕನ್ನಡಪರ ಮನಸ್ಸುಗಳು ಸ್ಪಂದಿಸಿವೆ.
ಮಾನವೀಯತೆ ಮೆರೆದಿದ್ದಾರೆ ಕನ್ನಡ ಸಂಘಟನೆ ಯುವಕರು. ನಿರಾಶ್ರಿತರಿಗೆ ಊಟ ಹಾಗೂ ಬಿಸ್ಕೇಟ್ ವಿತರಣೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ನಿರಾಶ್ರಿತರಿಗೆ ಸಹಾಯವನ್ನ ಕರ್ನಾಟಕ ನವ ನಿರ್ಮಾಣ ಪಡೆಯ ಯುವಕರು ಮಾಡಿದ್ದಾರೆ.
ಒಂದು ದಿನದ ಊಟ ಹಾಗೂ ಮಕ್ಕಳಿಗೆ ಬಿಸ್ಕೇಟ್ ನೀಡಿದ್ದಾರೆ. ಅಲ್ಲದೇ ಜಾನುವಾರುಗಳಿಗೆ ಒಂದು ಲೋಡ್ ಮೇವು ವಿತರಣೆ ಮಾಡಿದ್ದಾರೆ.