Publish Date: Sun, 07 Jul 2019 (18:15 IST)
Updated Date: Sun, 07 Jul 2019 (18:17 IST)
ಹಿಂದುಪುರದಲ್ಲಿ ಹಿಂದುಗಳು ಮಾಡಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೂರಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಿಸಿದ್ದಾರೆ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು. ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ಜಿಲ್ಲಾ ವಿಶ್ವ ಹಿಂದು ಪರಿಷತ್ ಸಂಚಾಲಕ ರುದ್ರೇಶ್ ಮತ್ತು ಕಾರ್ಯಕರ್ತರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸಿದ್ರು.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಳ್ಳಿಯಿಂದ ಆಂಧ್ರದ ಹಿಂದುಪುರಕ್ಕೆ ಅಕ್ರಮವಾಗಿ ಸಾಗಿಸಲಾಗುತಿದ್ದ 100 ಜಾನುವಾರುಗಳು, ಎಮ್ಮೆ ಮತ್ತು ಹಸುಗಳನ್ನು ರಕ್ಷಿಸಲಾಯಿತು.
ಸರಿಯಾದ ಮಾಹಿತಿ ನೀಡಲು ವಿಫಲವಾದ ಹಿನ್ನಲೆಯಲ್ಲಿ ಜಾನುವಾರುಗಳನ್ನು ಚಳ್ಳಕೆರೆ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ಜಾನುವಾರುಗಳನ್ನು ಗೋ ಶಾಲೆಗೆ ಒಪ್ಪಿಸಲಾಗಿದ್ದು, ಲಾರಿ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ.