ಕಾರ್ತಿಕಮಾಸ ಪ್ರಯುಕ್ತ ಪಾರ್ವತಾಂಭ ಜಾತ್ರೆಯು ಭಕ್ತರ ಸಡಗರ ನಡುವೆ ನೆರವೇರಿತು.
ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಅಲ್ಲಳ್ಳಿ ಪಾರ್ವತಾಂಭ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.
ಕಾರ್ತಿಕಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಪಾಲ್ಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮ ದೇವತೆಯ ಮೆರವಣಿಗೆಯಲ್ಲಿ ತಮ್ಮ ಹರಕೆ ತೀರಿಸಿದರು. ದೇವಿಯ ಕೃಪೆಗೆ ಪಾತ್ರರಾದರು.
ಜಾನುವಾರುಗಳಿಗೆ ದೇವಿಯ ಬಳಿ ಪೂಜೆ ಮಾಡಿಸಿದರೆ ಉತ್ತಮ ಏಳ್ಗೆ ಹೊಂದುವುದಲ್ಲದೇ, ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಹೀಗಾಗಿ ವಿವಿಧ ಗ್ರಾಮಗಳಿಂದ ಅಗಮಿಸಿದ್ದ ಜಾನುವಾರು ಮತ್ತು ಎತ್ತಿನ ಗಾಡಿಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.