ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ 30 ಕೋಟಿ ರೂ. ಕೊಟ್ಟು ವೈಯಕ್ತಿಕ ಬಳಕೆಗೆ ಹೆಲಿಕಾಪ್ಟರ್ ಖರೀದಿ ಮಾಡುತ್ತಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ.
ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದು ತೀವ್ರ ಟೀಕೆಗೊಳಗಾಗಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ಖರೀದಿ ಭಾರೀ ಸುದ್ದಿಯಾಗಿದೆ. ಹೀಗಾಗಿ ನೆಟ್ಟಿಗರು ಅವರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.
ಪಾಪ ರಸ್ತೆ ಗುಂಡಿ ಮುಚ್ಚಕ್ಕೆ ಸರ್ಕಾರದಲ್ಲಿ ಹಣ ಇಲ್ಲ ಅಂತಾ ಜಾರಕಿಹೊಳಿ ಹೆಲಿಕಾಪ್ಟರ್ ತಗೊಂಡಿರಬೇಕು ಅಲ್ವಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ನಮಗೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡಲಿ. ರಸ್ತೆಯಲ್ಲಿ ಹೋಗುವುದು ತಪ್ಪುತ್ತೆ ಎಂದು ಕಾಲೆಳೆದಿದ್ದಾರೆ.
ಸತೀಶ್ ಜಾರಕಿಹೊಳಿಯವರೇನೂ ಸಾಹುಕಾರರು. ಹೆಲಿಕಾಪ್ಟರ್ ತಗೊಂಡ್ರು. ಆದರೆ ಜನ ಸಾಮಾನ್ಯರ ಗತಿಯೇನು? ನಮಗೆ ಇದೇ ಗುಂಡಿ ಬಿದ್ದ ರಸ್ತೆಗಳೇ ಗತಿ ಎಂದು ಹಲವರು ವ್ಯಂಗ್ಯ ಮಾಡಿದ್ದಾರೆ.