ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಕೇಸ್ ಗೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದೀಗ ಎಸ್ಐಟಿ ಬಂಧಿಸಿರುವ ಚಿನ್ನಯ್ಯ ತನ್ನ ಪತ್ನಿ ಜೊತೆ ಬಂದು ಮಹೇಶ್ ಶೆಟ್ಟಿ ತಿಮರೋಡಿ ಜೊತೆ ಶವ ಹೂತು ಹಾಕಿದ ವಿಚಾರವನ್ನು ವಿವರಿಸುವ ವಿಡಿಯೋವೊಂದನ್ನು ಹರಿಯಬಿಡಲಾಗಿದೆ.
ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ಈ ವಿಡಿಯೋವನ್ನು ಎರಡು ಭಾಗಗಳಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ತಿಮರೋಡಿ ಮುಂದೆ ಚಿನ್ನಯ್ಯ ಸಾಕಷ್ಟು ವಿಚಾರಗಳನ್ನು ಹೇಳುತ್ತಾನೆ.
ಶವಗಳನ್ನು ಕೈ ಗಾಡಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ, ಪೊಲೀಸರೂ ಬರುತ್ತಿರಲಿಲ್ಲ. ಶವ ಹೂತು ಹಾಕಿ ಮಣ್ಣು ಮುಚ್ಚುತ್ತಿದ್ದೆ. ಕೆಲವರಿಗೆ ಹೊಡೆದು ಮೂಗಲ್ಲೆಲ್ಲಾ ರಕ್ತ ಬರುವ ಹಾಗೆ ಹೊಡೆಯುತ್ತಿದ್ದರು ಎಂದೆಲ್ಲಾ ಚಿನ್ನಯ್ಯ ವಿವರಿಸುತ್ತಾನೆ.
ಈತ ವಿಡಿಯೋದಲ್ಲಿ ಹೇಳಿರುವ ಅಂಶ ಬೆಚ್ಚಿಬೀಳುಸುವಂತಿದ್ದು, ಆರೋಪಗಳಿಂದ ಮುಕ್ತರಾಗಲೆಂದೇ ಬುರುಡೆ ಗ್ಯಾಂಗ್ ಈ ವಿಡಿಯೋ ಹರಿಯಬಿಟ್ಟಿರಬಹುದೇ ಎಂಬ ಸಂಶಯ ಮೂಡಿದೆ. ಈ ವಿಡಿಯೋ ಇಲ್ಲಿದೆ ನೋಡಿ.