Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದ ಮಹಿಳೆಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ರೌಡಿಶೀಟರ್ವೊಬ್ಬನನ್ನು ಸಿಸಿಬಿ ವಿಶೇಷ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೂಂಡಾ ಕಾಯಿದೆಯಡಿ ಬಂಧಿಸಿದ್ದಾರೆ.
ಎಂ.ಎನ್. ನವೀನ್ (28) ಬಂಧಿತ ಆರೋಪಿ. ಈತನು ಮೂಲತಃ ಮಂಡ್ಯ ಜಿಲ್ಲೆಯವನಾಗಿದ್ದು, ನಗರದಲ್ಲಿ ನೆಲೆಸಿ, ತನ್ನ ಸಹಚರರ ಮೂಲಕ ಹೊರ ರಾಜ್ಯದ ಯುವತಿಯರನ್ನು ಕರೆತಂದು ಹೋಟೆಲ್, ಲಾಡ್ಜ್ಗಳಲ್ಲಿ ಇಡುತ್ತಿದ್ದ. ಬಳಿಕ ಹಣವಿರುವ ಗಿರಾಕಿಗಳಿಗೆ ಈ ಯುವತಿಯರನ್ನು ಕಳುಹಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು.
ಆರೋಪಿ ವಿರುದ್ಧ ಜಯನಗರ, ಜೆಪಿನಗರ, ಕೆಎಸ್ ಲೇಔಟ್, ಬಾಣಸವಾಡಿ ಪೆÇಲೀಸ್ ಠಾಣೆಗಳಲ್ಲೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿವೆ.
ನವೀನ್ ಜೈಲಿಗೆ ಹೋಗಿ ಬಂದ ಬಳಿಕವೂ ದಂಧೆ ಮುಂದುವರಿಸಿದ್ದ. ಹಾಗಾಗಿ, ಈತನನ್ನು ಗೂಂಡಾ ಕಾಯಿದೆಯಡಿಯಲ್ಲಿ ಬಂಧಿಸಲು ಸಿಸಿಬಿ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಸಿಸಿಬಿ ಅಧಿಕಾರಿಗಳ ವರದಿಯನ್ನು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ಹಾಗೂ ಜಂಟಿ ಪೆÇಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಈತನ ಬಂಧನಕ್ಕೆ ಶಿಫಾರಸು ಮಾಡಿದ್ದರು. ಅದರಂತೆ, ನಗರ ಪೆÇಲೀಸ್ ಆಯುಕ್ತ ಕಮಲ್ಪಂತ್ ಅವರು ಆರೋಪಿಯನ್ನು ಗೂಂಡಾ ಕಾಯಿದೆಯಡಿ ಬಂಧಿಸುವಂತೆ ಆದೇಶಿಸಿದ್ದರು.