ಆರು ದಿನ ನಡೆಯುತ್ತಿದ್ದ ಪರೀಕ್ಷೆಯನ್ನ ಈ ಬಾರಿ ಎರಡೇ ದಿನದಲ್ಲಿ ಪರೀಕ್ಷೆ ಮುಗಿಸಿದೆ. ಇಂದು ಬಹಳ ಕಾತರದಿಂದ ಕಾಯುತ್ತಿದ್ದ ಫಲಿತಾಂಶ ಹೊರಬಿದ್ದಿದೆ. ಒಬ್ಬ ವಿದ್ಯಾರ್ಥಿನಿ ಬಿಟ್ಟರೆ ಉಳಿದವರೆಲ್ಲರೂ ಪಾಸ್ ಆಗಿದ್ದಾರೆ.
2020-21ರ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ನೂತನ ಶಿಕ್ಷಣ ಸಚಿವ ನಾಗೇಶ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ 8.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 99.9 ಮಕ್ಕಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆ ಬರೆದಂತ 4,70,160 ಬಾಲಕರು ಕೂಡ ಪಾಸ್ ಆಗಿದ್ದಾರೆ. ಇನ್ನು 4,01,281 ಹೆಣ್ಣು ಮಕ್ಕಳು ಪಾಸ್ ಆಗಿದ್ದಾರೆ. 30,7932 ಸರ್ಕಾರಿ ಶಾಲೆ ಮಕ್ಕಳು ಉತ್ತೀರ್ಣರಾಗಿದ್ದು, ಅನುದಾನಿತ 20,8515 ವಿದ್ಯಾರ್ಥಿಗಳು ಪಾಸ್, ಅನುದಾನರಹಿತ 26,4095 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಎ+ ಗ್ರೇಡ್ ನಲ್ಲಿ 1,28,931 ವಿದ್ಯಾರ್ಥಿಗಳು ತೇರ್ಗಡೆಯಾದರೆ, ಎ ಗ್ರೇಡ್ ಅಂಕ ಪಡೆದವರು 2,50,317 ವಿದ್ಯಾರ್ಥಿಗಳು, B ಗ್ರೇಡ್ ಪಡೆದವರು 2,87,684 ವಿದ್ಯಾರ್ಥಿಗಳು, ಸಿ ಗ್ರೇಡ್ ಅಂಕ ಪಡೆದವರು 1,13,610 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
625 ಅಂಕ ಪಡೆದವರು 150
623 ಅಂಕ ಪಡೆದವರು 289
622 ಅಂಕ ಪಡೆದವರು 2
621 ಅಂಕ ಪಡೆದವರು 449
620 ಅಂಕ ಪಡೆದವರು 28
ಭಾಷಾವಾರು ಪಾಸ್ ಆದ ವಿದ್ಯಾರ್ಥಿಗಳನ್ನ ನೋಡೊದಾದ್ರೆ ಪ್ರಥಮ ಭಾಷೆಯಲ್ಲಿ 25,702 ವಿದ್ಯಾರ್ಥಿಗಳು ಪಾಸ್, ದ್ವಿತಿಯ ಭಾಷೆ -36628 ಮಕ್ಕಳು, ತೃತೀಯ ಭಾಷೆ 36,776 ವಿದ್ಯಾರ್ಥಿಗಳು, ಗಣಿತ 6321 ವಿದ್ಯಾರ್ಥಿಗಳು ಪಾಸ್, ವಿಜ್ಞಾನ 3649 ವಿದ್ಯಾರ್ಥಿಗಳು ಪಾಸ್, ಸೋಷಿಯಲ್ ಸೈನ್ಸ್ 9,367 ವಿದ್ಯಾರ್ಥಿಗಳು. ಇನ್ನು ನಗರ ಪ್ರದೇಶದಲ್ಲಿ ಉತ್ತೀರ್ಣರಾದವರು 33,5081 ವಿದ್ಯಾರ್ಥಿಗಳು, ಗ್ರಾಮೀಣ ಭಾಗದಲ್ಲಿ ಪಾಸ್ ಆದವರು 44,5461. ಕಳೆದ ವರ್ಷ ನಗರ ಪ್ರದೇಶದಲ್ಲಿ ಶೇ. 73.41ರಷ್ಟು ಫಲಿತಾಂಶ ಬಂದಿದೆ.
ಇನ್ನು ಈ ಬಾರಿ ಪರೀಕ್ಷೆಗೆ ಹಾಜರಾದ ಯಾರನ್ನು ಫೇಲ್ ಮಾಡಲ್ಲ ಎಂದೇ ಹೇಳಲಾಗ್ತಾ ಇತ್ತು. ಹಾಗಾಗಿ ಎಲ್ಲರೂ ಪಾಸ್ ಆಗಿದ್ದಾರೆ. ಶೇ.9 ವಿದ್ಯಾರ್ಥಿಗಳು ಮಾತ್ರ ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ. ಒಂದು ವಿಷಯಕ್ಕೆ 28 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 13 ಮಕ್ಕಳಿಗೆ ಈ ರೀತಿ ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಇನ್ನುಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಚೆನ್ನಾಗಿಯೇ ಬರೆದಿದ್ದಾರೆ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.