Publish Date: Sat, 12 Oct 2019 (14:11 IST)
Updated Date: Sat, 12 Oct 2019 (14:13 IST)
ಬೆಂಗಳೂರು : ಮಾಜಿ ಡಿಸಿಎಂ ಪರಮೆಶ್ವರ್ ಮೇಲಿನ ಐಟಿ ದಾಳಿ ಹಿನ್ನಲೆಯಲ್ಲಿ ಅವರ ಆಪ್ತ ಹಾಗೂ ಪಿಎ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪರಮೆಶ್ವರ್ ಮೇಲಿನ ಐಟಿ ದಾಳಿಯಿಂದ ಬೇಸತ್ತು, ಹಾಗೂ ತಮ್ಮ ಮೇಲೂ ಐಟಿ ದಾಳಿ ನಡೆಸಬಹುದು ಎಂಬ ಭಯದಿಂದ ಸಾಯಿ ಗ್ರೌಂಡ್ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ರಮೇಶ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಐಟಿ ಅಧಿಕಾರಿಗಳ ದಾಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ‍್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.