Publish Date: Sat, 12 Oct 2019 (10:19 IST)
Updated Date: Sat, 12 Oct 2019 (10:21 IST)
ಬೆಂಗಳೂರು : ಶಿಕ್ಷಣ ಸಂಸ್ಥೆ ಹಾಗೇ ನಿವಾಸದ ಮೆಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಪರಮೆಶ್ವರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ ಸೀಟ್ ಬ್ಲಾಕಿಂಗ್ ದಂಧೆ ಹಾಗೂ ಹವಾಲಾ ದಂಧೆ ನಡೆದಿದೆ ಎನ್ನಲಾಗಿದ್ದು,, ಹವಾಲಾ ಹಣ ರವಾನೆ ಬಗ್ಗೆ ಐಟಿ, ಇಡಿ ಅಧಿಕಾರಿಗಳಿಗೆ ಅಧಿಕೃತ ಮಾಹಿತಿ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಡಿ.ಕೆ.ಶಿವಕುಮಾರ್ ರೀತಿಯಲ್ಲೇ ಪರಮೇಶ್ವರ್ ಅವರಿಗೂ ಐಟಿ ಹಾಗೂ ಇಡಿ ಕಂಟಕ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.