Publish Date: Sat, 12 Oct 2019 (11:10 IST)
Updated Date: Sat, 12 Oct 2019 (11:13 IST)
ಬೆಂಗಳೂರು : ಹಾಸನ ನಗರದಲ್ಲಿ ನಡೆಯುವ ಶ್ರೀ ಹಾಸನಾಂಭ ಉತ್ಸವಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನ ನೀಡಲಾಗಿದೆ.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಇಂದು ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಖುದ್ದಾಗಿ ಸಿಎಂ ಅವರನ್ನು ಉತ್ಸವಕ್ಕೆ ಆಹ್ವಾನಿಸಿದ್ದಾರೆ.
ಅ. 17 ರಿಂದ ಅ. 29 ರ ವರೆಗೆ 13 ದಿನಗಳ ಕಾಲ ಹಾಸನಾಂಭೆಯ ಉತ್ಸವ ನಡೆಯಲಿದ್ದು, ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.