Publish Date: Thu, 08 Oct 2020 (22:35 IST)
Updated Date: Thu, 08 Oct 2020 (22:38 IST)
ಇನ್ನೊಂದು ವಾರ ನನ್ನ ಮನೆ ಹಾಗೂ ಕಚೇರಿಗೆ ಜನರು ಬರಬಾರದು ಎಂದು ಶಾಸಕರೊಬ್ಬರು ವಿನಂತಿಸಿಕೊಂಡಿದ್ದಾರೆ.
ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಈ ರೀತಿ ಮನವಿ ಮಾಡಿದ್ದಾರೆ.
ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಇನ್ನು, ಹೋಂ ಐಸೋಲೇಷನ್ ಆಗಿದ್ದು, ಪ್ರತಿಯೊಬ್ಬರೂ ಕೊರೊನಾ ತಡೆಗಾಗಿ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು.
ತಮ್ಮ ಸಂಪರ್ಕಕ್ಕೆ ಬಂದವರು ತಪ್ಪದೇ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ.
Jagadeesh
Publish Date: Thu, 08 Oct 2020 (22:35 IST)
Updated Date: Thu, 08 Oct 2020 (22:38 IST)