Publish Date: Wed, 07 Oct 2020 (07:45 IST)
Updated Date: Wed, 07 Oct 2020 (07:48 IST)
ತೆಲಂಗಾಣ : ದೈಹಿಕ ಸುಖ ನೀಡಲು ವಿರೋಧ ವ್ಯಕ್ತಪಡಿಸಿದ 13 ವರ್ಷದ ಹುಡುಗಿಯನ್ನು ಬೆಂಕಿ ಹಚ್ಚಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹುಡುಗಿ ಮನೆಗೆಲಸ ಮಾಡುತ್ತಿದ್ದು, ಮನೆಯ ಮಾಲೀಕನ 26 ವರ್ಷ ವಯಸ್ಸಿನ ಮಗ ಆಕೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದಾಗ. ಆಗ ಹುಡುಗಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಹಾಗೇ ಈ ವಿಚಾರ ಯಾರಿಗೂ ಹೇಳದಂತೆ ಆಕೆಯ ಕುಟುಂಬದವರಿಗೂ ಬೆದರಿಕೆ ಹಾಕಿದ್ದಾನೆ.
ಆದರೆ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಯ ವಿರುದ್ಧ ದೂರು ದಾಖಲಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹುಡುಗಿಯ ಶೇ.70ರಷ್ಟು ದೇಹ ಸುಟ್ಟುಹೋಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.