ಕಲಬುರಗಿ : ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಸಂಬಂಧಿಸಿ ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ.
ಈ ಬಗ್ಗೆ ಕಾಂಗ್ರೆಸ್ ಅರ್ಜಿಯನ್ನು ಕಲಬುರಗಿ ಹೈಕೋರ್ಟ್ ಎತ್ತಿ ಹಿಡಿದಿದೆ. ಕಲಬುರಗಿ ಹೈಕೋರ್ಟ್ ನ್ಯಾ. ಇಂದರೇಶ್ ಪೀಠ ಆದೇಶ ನೀಡಿದೆ. ಹೈಕೋರ್ಟ್ ಆದೇಶದಿಂದ ಬಿಜೆಪಿ ನಾಯಕರಿಗೆ ಹಿನ್ನಡೆ ಉಂಟಾಗಿದೆ.
63 ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ. ನವೆಂಬರ್ನಲ್ಲಿ ಹೊರಡಿಸಿದ್ದ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸುವಂತೆ ಹೈಕೋರ್ಟ್ನಿಂದ ಸೂಚನೆ ಲಭಿಸಿದೆ. ಬಿಜೆಪಿ ಅಧಿಕಾರಕ್ಕೆ ಬರಲು ಐವರ ಹೆಸರನ್ನು ಸೇರಿಸಿತ್ತು.
ಪರಿಷತ್ನ ಐವರು ಸದಸ್ಯರ ಹೆಸರನ್ನು ಬಿಜೆಪಿ ಸೇರಿಸಿತ್ತು. ಕಲಬುರಗಿ ಜಿಲ್ಲೆಗೆ ಸಂಬಂಧ ಇಲ್ಲದಿದ್ದವರ ಹೆಸರು ಸೇರಿಸಿತ್ತು. ಮತದಾರರ ಪಟ್ಟಿಯಲ್ಲಿ ಐವರ ಹೆಸರು ಸೇರಿಸಿದ್ದ ಬಿಜೆಪಿ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೊರೆಹೋಗಿತ್ತು.
ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಹಳೆ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆದೇಶ ನೀಡಲಾಗಿದೆ.