Publish Date: Tue, 01 Feb 2022 (17:51 IST)
Updated Date: Tue, 01 Feb 2022 (19:53 IST)
ಲಕ್ನೋ : ಸಮಾಜವಾದಿ ಪಕ್ಷದ ಕೆಂಪು ಟೋಪಿಗಳಲ್ಲಿ ಅಯೋಧ್ಯೆಯಲ್ಲಿ ಗುಂಡಿಕ್ಕಿ ಕೊಂದ ಮತು ಮುಜಪ್ಫರ್ನಗರದ ಗಲಭೆಯಲ್ಲಿ ಮೃತಪಟ್ಟಕರ ಸೇವಕರ ರಕ್ತ ಅಡಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಉತ್ತರಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷ ಹಜ್ ಭವನ ನಿರ್ಮಿಸಿ, ಅಯೋಧ್ಯೆ ಮೇಲೆ ದಾಳಿ ನಡೆಸಿದ ಉಗ್ರರ ರಕ್ಷಣೆ ಮಾಡಿದ್ದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಾನಸ ಸರೋವರ ಭವನ ನಿರ್ಮಿಸಿತು.
ಅಷ್ಟುಮಾತ್ರವಲ್ಲ ರಾಜ್ಯದ ರೈತರ ದೊಡ್ಡ ಪ್ರಮಾಣದ ಸಾಲ ಮನ್ನಾ ಮಾಡಿತು. ಇದೇ ಎರಡೂ ಸರ್ಕಾರಗಳ ನಡುವಿನ ವ್ಯತ್ಯಾಸ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.