Publish Date: Tue, 02 Jul 2019 (16:46 IST)
Updated Date: Tue, 02 Jul 2019 (16:48 IST)
ಕಾಡಿನಲ್ಲಿರಬೇಕಾದ ಚಿರತೆಯೊಂದು ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಭಾರೀ ಅನಾಹುತ ಆಗಿರುವ ಘಟನೆ ನಡೆದಿದೆ.
ಆಹಾರಕ್ಕಾಗಿ ಗ್ರಾಮದೊಳಗೆ ನುಗ್ಗಿರುವ ಚಿರತೆಯೊಂದು ಜನರ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ.
ಆಹಾರಕ್ಕಾಗಿ ಗ್ರಾಮದೊಳಗೆ ಚಿರತೆ ನುಗ್ಗಿದ್ದು, ಮನೆಯೊಂದರಲ್ಲಿ ಅವಿತು ಕುಳಿತಿದೆ. ಈ ವೇಳೆ ಮನೆಯಿಂದ ತಪ್ಪಿಸಿಕೊಂಡು ಹೋಗುವಾಗ ಮೂವರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿರತೆ ಪೊದೆಯೊಳಗೆ ಅವಿತು ಕುಳಿತಿದೆ ಎನ್ನಲಾಗ್ತಿದೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ಚಿರತೆ ಹಿಡಿಯಲು ಬಲೆಹಾಕಿ ಕಾದು ಕುಳಿತಿದ್ದಾರೆ. ಚಿರತೆಯ ದಾಳಿಯಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.