Publish Date: Thu, 27 Jun 2019 (17:59 IST)
Updated Date: Thu, 27 Jun 2019 (18:16 IST)
ಮಹತ್ವದ ಹಾಗೂ ಕುತೂಹಲಕರ ಬೆಳವಣಿಗೆಯೊಂದರಲ್ಲಿ ಐಟಿ ಅಧಿಕಾರಿಗಳು ಗೋಲ್ಡ್ ಮೇಲೆ ದಾಳಿ ನಡೆಸಿದ್ದಾರೆ.
ಎರಡು ಜ್ಯುವೆಲ್ಲರಿ ಮಳಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ಕಂಕನಾಡಿ ಬಳಿ ಇರುವ ಚಿನ್ನಾಭರಣ ಮಳಿಗೆಗಳಾದ ಸುಲ್ತಾನ್ ಗೋಲ್ಡ್ ಹಾಗೂ ಸಿಟಿ ಗೋಲ್ಡ್ ಮೇಲೆ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಡತಗಳ ಪರಿಶೀಲನೆಯನ್ನು ಮುಂದುವರಿಸಿದ್ದಾರೆ.
ಸುಲ್ತಾನ್ ಗೋಲ್ಡ್ ಶಾಖೆಯೂ ರಾಜ್ಯದ ನಾಲ್ಕು ಕಡೆಗಳಲ್ಲಿದ್ದು, ಮಂಗಳೂರು, ಉಡುಪಿ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಶಾಖೆಗಳ ಮೇಲೆ ಏಕಾಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಕೇರಳದ ಉದ್ಯಮಿ ರವೂಫ್ ಸುಲ್ತಾನ್ ಎಂಬುವವರು ಇದರ ಮಾಲೀಕರಾಗಿದ್ದಾರೆ.