Publish Date: Sat, 29 Jun 2019 (18:30 IST)
Updated Date: Sat, 29 Jun 2019 (18:33 IST)
ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸರು ಭಾರೀ ಶಾಕ್ ನೀಡಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆಕೋರರ ಮೇಲೆ ಹಠಾತ್ ದಾಳಿ ಮಾಡಿದ್ದಾರೆ.
11 ಪೊಲೀಸ್ ಠಾಣಾ ವ್ಯಾಪ್ತಿಯ 12 ಜನ ಬಡ್ಡಿಕೋರರ ಮೇಲೆ ದಾಳಿ ಮಾಡಲಾಗಿದೆ. ವೆಂಕಟೇಶ್, ನಾಗರಾಜ್, ಕುಮಾರ್, ದಿಲೀಪ್, ರಾಮಕೃಷ್ಣ, ಸುಜಾತ, ವೆಂಕಟೇಶ ಆಲಿಯಾಸ್ ಅ್ಯಸಿಡ್ ವೆಂಕಟೇಶ್, ಜಯರಾಮನ ಸೇರಿದಂತೆ 6 ಮಂದಿ ಬಂಧನ ಮಾಡಲಾಗಿದೆ.
ಆರೋಪಿಗಳಿಂದ 13,14 ಲಕ್ಷ ನಗದು, 145 ಖಾಲಿ ಬ್ಯಾಂಕ್ ಚೆಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಾಂಡ್ ಪೇಪರ್ ಹಾಗೂ ಸ್ಟ್ಯಾಂಪ್ ಪತ್ರಗಳನ್ನು ಜಪ್ತ್ ಮಾಡಲಾಗಿದೆ. ಈ ಪೈಕಿ ಜಗದೀಶ್ ಎಂಬಾತನಿಂದ 12.50 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಕೆಪಿಐಸಿಇ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.