ಉಪನೋಂದಣಿ ಕಚೇರಿಯ ಈ ಹೊಸ ಬದಲಾವಣೆ ಬಗ್ಗೆ ತಿಳಿದುಕೊಳ್ಳಿ: ನೌಕರರಿಗೆ ಭಾರೀ ಲಾಭ

Krishnaveni K
ಮಂಗಳವಾರ, 24 ಸೆಪ್ಟಂಬರ್ 2024 (12:29 IST)
ಬೆಂಗಳೂರು: ರಾಜ್ಯದ ಉಪನೋಂದಣಿ ಕಚೇರಿ ವಿಚಾರದಲ್ಲಿ ಮಹತ್ವದ ಬದಲಾವಣೆಯೊಂದು ಆಗಿದ್ದು, ಇದರಿಂದ ನೌಕರ ವರ್ಗದವರಿಗೆ ದೊಡ್ಡ ಉಪಕಾರವಾದಂತಾಗಲಿದೆ. ಅದೇನು ಇಲ್ಲಿದೆ ವಿವರ.

ಇದುವರೆಗೆ ಸರ್ಕಾರೀ ಕಚೇರಿಯಾಗಿರುವ ಉಪನೋಂದಣಿ ಕಚೇರಿಗಳು ಪ್ರತೀ ಭಾನುವಾರ ಮತ್ತು ಎರಡನೇ, ನಾಲ್ಕನೇ ಶನಿವಾರಗಳಂದು ಇತರೆ ಸರ್ಕಾರೀ ಕಚೇರಿಯಂತೆ ರಜಾ ದಿನವಾಗಿರುತ್ತಿತ್ತು. ಆದರೆ ಇದರಿಂದ ಉದ್ಯೋಗಸ್ಥರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ತೊಂದರೆಯಾಗುತ್ತಿತ್ತು.

ಹೀಗಾಗಿ ಈಗ ಉಪನೋಂದಣಿ ಕಚೇರಿಯನ್ನು ಶನಿವಾರ ಮತ್ತು ಭಾನುವಾರವೂ ತೆರೆದಿಡಲು ತೀರ್ಮಾನಿಸಲಾಗಿದೆ. ಭಾನುವಾರಗಳಂದೂ ರಾಜ್ಯದ ಎಲ್ಲಾ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ನೌಕರ ವರ್ಗದವರಿಂದ ಈ ಬಗ್ಗೆ ಬಹುದಿನಗಳಿಂದ ಬೇಡಿಕೆ ಕೇಳಿಬರುತ್ತಲೇ ಇತ್ತು.

ಉದ್ಯೋಗಸ್ಥರಿಗೆ ಉಪನೋಂದಣಿ ಕಚೇರಿಗೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಒಂದು ದಿನ ಕಚೇರಿಗೆ ರಜೆ ಹಾಕುವ ಪರಿಸ್ಥಿತಿಯಿತ್ತು. ಆದರೆ ಈಗ ವಾರದ ಎಲ್ಲಾ ದಿನಗಳೂ ಕಚೇರಿ ತೆರೆದಿರಲಿದೆ. ಜೊತೆಗೆ ಭಾನುವಾರ ಅಥವಾ ಶನಿವಾರ ಕೆಲಸ ಮಾಡಿದ ಅಧಿಕಾರಿಗಳಿಗೆ ಮಂಗಳವಾರದಂದು ವಾರದ ರಜೆ ಸಿಗಲಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಮಾಚಲಪ್ರದೇಶದಲ್ಲಿ ದುರಂತ: ತಮ್ಮ ಸಾವನ್ನು ತಾವೇ ಲೈವ್ ಆಗಿ ರೆಕಾರ್ಡ್ ಮಾಡಿಕೊಂಡರು Video

ಥೂ.. ತುಂಬಾ ನಾಟಿ ಈ ಕೋತಿಗಳು.. ಫೋಟೋಗೆ ಪೋಸ್ ಕೊಡುತ್ತಿದ್ದ ಯುವತಿ ತೊಡೆ ಮೇಲೇ ಹೀಗೆ ಮಾಡೋದಾ Video

Video, ಅವ್ನು ಏನ್ರೀ ಮಾತಾಡ್ತಾನೆ ಅವ್ನ ಮನೆ ಕಾಯೋಗ: ಪ್ರದೀಪ್ ಈಶ್ವರ್‌ಗೆ ವಿ ಸೋಮಣ್ಣ ಕ್ಲಾಸ್‌

Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೇ ಈ ದಿನದಿಂದ ಭಾರೀ ಮಳೆ

ಗಂಡು ಮಗು ಹುಟ್ಟಿದಕ್ಕೆ ಪಾರ್ಟಿ ಕೇಳಿದ್ದಕ್ಕೆ ಸ್ನೇಹಿತನಾ ಪ್ರಾಣನೇ ಹೋಯಿತು

ಮುಂದಿನ ಸುದ್ದಿ
Show comments