ಬೆಂಗಳೂರು: ನಾಡಹಬ್ಬರ ದಸರಾ ಪ್ರಯುಕ್ತ ದಿನಗೂಲಿ ನೌಕರರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ನಾಡಹಬ್ಬ ದಸರಾ ಬೆನ್ನಲ್ಲೇ ನೌಕರರಿಗೆ ಆರ್ಥಿಕ ಸೌಲಭ್ಯ ಮಂಜೂರು ಮಾಡಲಾಗಿದೆ.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರಿಗೆ 2024 ರ ಪರಿಷ್ಕೃತ ವೇತನ ಶ್ರೇಣಿಗಳನ್ವಯ ಆರ್ಥಿಕ ಸೌಲಭ್ಯ ಮಂಜೂರು ಮಾಡಲಾಗಿದೆ. ಇದು ದಿನಗೂಲಿ ನೌಕರರ ಮುಖದಲ್ಲಿ ಸಂತಸ ಮೂಡಿಸಿದೆ. ನಾಡಹಬ್ಬ ದಸರಾ ಸಂದರ್ಭದಲ್ಲೇ ಗಿಫ್ಟ್ ಸಿಕ್ಕಿದೆ.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಬರುವ ನೌಕರರಿಗೆ ಅವರ ಹುದ್ದೆಗೆ ಅನುಗುಣವಾಗಿ ವೇತನ ಶ್ರೇಣಿಯಲ್ಲಿ ಕನಿಷ್ಠ ವೇತನ ಪಾವತಿಸಬೇಕೆಂದು ಸರ್ಕಾರವು ಆದೇಶಿಸಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯ ಶೇ.75 ರಷ್ಟು ಮತ್ತು ಅವರು ವಾಸ ಮಾಡುವ ಸ್ಥಳಕ್ಕೆ ಅನುಗುಣವಾಗಿ ಮನೆ ಬಾಡಿಗೆಯ ಭತ್ಯೆಯ ಸಾಮಾನ್ಯದ ದರ ಶೇ.75 ರಷ್ಟು ಪಾವತಿ ಮಾಡಲು ಆದೇಶಿಸಲಾಗಿದೆ.
ಈ ಮೂಲಕ ರಾಜ್ಯ ಸರ್ಕಾರ 7 ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಿದೆ. ನಿಯಮಗಳ ಪ್ರಕಾರ ಅರ್ಹ ದಿನಗೂಲಿ ನೌಕರರಿಗೆ ಈ ಯೋಜನೆಯ ಲಾಭ ಸಿಗಲಿದೆ.