Publish Date: Sat, 30 Apr 2022 (20:37 IST)
Updated Date: Sat, 30 Apr 2022 (20:39 IST)
ನಿನ್ನೆಯಷ್ಟೇ ರಾಧಿಕಾ ಪಂಡಿತ್ ಇನ್ಸ್ ಟಾಗ್ರಾಮ್ ಪೇಜ್ನಲ್ಲಿ ಹೊಸ ಫೋಟೋವೊಂದನ್ನು ಹಾಕಿ ನಾನೂ ನಾಚುತ್ತೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಹೃದಯ ಎಮೋಜಿಗಳನ್ನು ನೆಚ್ಚಿನ ನಟಿಗೆ ಕಳುಹಿಸಿದ್ದಾರೆ. ತೆರೆಯ ಮೇಲೆ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದೂ ಅಭಿಮಾನಿಗಳು ಬರೆದಿದ್ದಾರೆ. ಕೆಲ ತಿಂಗಳಿಂದ ರಾಧಿಕಾ ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮೂರ್ನಾಲ್ಕು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅವರು,ಈಗಲಾದರೂ ತೆರೆ ಮೇಲೆ ಬರ್ಬೇಕು, ಯಶ್ ಮತ್ತು ರಾಧಿಕಾ ಮತ್ತೆ ಒಟ್ಟಾಗಿ ನಟಿಸಬೇಕು ಎನ್ನುವುದು ಇವರಿಬ್ಬರ ಅಭಿಮಾನಿಗಳ ಆಗ್ರಹ. ಒಟ್ಟಿಗೆ ನಟಿಸಿದ ಬಹುತೇಕ ಚಿತ್ರಗಳು ಹಿಟ್ ಆಗಿರುವುದರಿಂದ ಮತ್ತೆ ಯಾಕೆ ತೆರೆಯ ಮೇಲೆ ಕಾಣಿಸಿಕೊಳ್ಳಬಾರದು ಎನ್ನುವುದು ಅಭಿಮಾನಿಗಳ ಪ್ರಶ್ನೆ
geetha
Publish Date: Sat, 30 Apr 2022 (20:37 IST)
Updated Date: Sat, 30 Apr 2022 (20:39 IST)