Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನಿನ್ನೆಯಷ್ಟೇ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಹೆಚ್ಚು ಟ್ರೋಲ್ ಆಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್, ಇವತ್ತು ರಾಷ್ಟ್ರ ಭಾಷೆಯ ಕಾರಣಕ್ಕಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿ ಕನ್ನಡಿಗರ ಎದೆಯಲ್ಲಿ ರೋಷಾಗ್ನಿ ಹೆಚ್ಚಿಸಿದ್ದರು. ಕಂಗನಾ ಕೂಡ ಅಜಯ್ ದೇವಗನ್ ಮಾತಿಗೆ ಅನುಮೋದನೆ ನೀಡುವುದಷ್ಟೇ ಅಲ್ಲ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನಾವು ಇನ್ನೂ ಆಳವಾಗಿ ಯೋಚಿಸಬೇಕಿದೆ. ಹಿಂದಿ, ಫ್ರೆಂಚ್ ಸೇರಿದಂತೆ ಹಲವು ಭಾಷೆಗಳ ಉಗಮಕ್ಕೆ ಸಂಸ್ಕೃತ ಕಾರಣ. ಹಾಗಾಗಿ ಸಂಸ್ಕೃತ ಭಾಷೆಯನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕು. ಕಡ್ಡಾಯವಾಗಿ ಅದನ್ನು ಶಾಲೆಯಲ್ಲಿ ಕಲಿಸಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ