Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ?

ಸಚಿವ ಸುನಿಲ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ?
ಮಂಗಳೂರು , ಮಂಗಳವಾರ, 10 ಜನವರಿ 2023 (10:35 IST)
ಮಂಗಳೂರು : ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಕಾರ್ಕಳದ ಇಬ್ಬರು ಸ್ಥಳೀಯ ಮುಖಂಡರಿಗೆ ಬೆಂಗಳೂರಿನ 12ನೇ ಸಿಟಿ ಸಿವಿಲ್ ನ್ಯಾಯಾಲಯ ದಂಡ ವಿಧಿಸುವ ಜತೆಗೆ ಕ್ಷಮೆಯಾಚನೆಗೆ ಸೂಚಿಸಿದೆ.

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಕಾರ್ಕಳದ ಯೋಗೇಶ್ ನಯನಾ ಇನ್ನಾ ಹಾಗೂ ರಾಧಾಕೃಷ್ಣ ನಾಯಕ್ ಎಂಬುವರು ಸಚಿವ ಸುನಿಲ್ ಕುಮಾರ್ ವಿರುದ್ಧ ಫೇಸಬುಕ್ ಸೇರಿದಂತೆ ಇತರೆ ಜಾಲತಾಣದಲ್ಲಿ ಅವಹೇಳನಕಾರಿ, ಸುಳ್ಳು ಹಾಗೂ ದುರುದ್ದೇಶಪೂರಿತ ಬರಹವನ್ನು ಪ್ರಕಟಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋದ ಸುನಿಲ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದೋಷಿಗಳಿಗೆ ಕ್ಷಮೆ ಯಾಚಿಸುವ ಜತೆಗೆ ತಲಾ 25 ಸಾವಿರ ರೂ. ದಂಡ ಸಲ್ಲಿಸಬೇಕು. ಜತೆಗೆ ಆಧಾರ ರಹಿತ, ಅಪ್ರಮಾಣಿಕೃತ, ದುರುದ್ದೇಶಪೂರಿತ ಬರಹಗಳನ್ನು ಜಾಲತಾಣದಲ್ಲಿ ಪ್ರಕಟಿಸದಂತೆ ಪ್ರತಿಬಂಧ ವಿಧಿಸಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ