ಚೆನ್ನೈ : ತಮಿಳುನಾಡಿನ ರಾಜ್ಯಪಾಲ ಆರ್ಎನ್ ರವಿ ಅವರು ಸೋಮವಾರ ವಿಧಾನಸಭಾ ಅಧಿವೇಶನದ ವೇಳೆ ಗದ್ದಲ ಕೋಲಾಹಲದ ನಡುವೆ ವಿಧಾನಸಭೆಯಿಂದ ಹೊರನಡೆದಿದ್ದಾರೆ.
ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಕಡತಕ್ಕೆ ತೆಗೆದುಕೊಳ್ಳಬೇಕು, ರಾಜ್ಯಪಾಲರು ಸೇರಿಸಿರುವ ಉಳಿದ ಭಾಷಣವನ್ನು ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸ್ಪೀಕರ್ಗೆ ಹೇಳಿದ್ದು, ಈ ಬಳಿಕ ಗವರ್ನರ್ ಆರ್ಎನ್ ರವಿ ಸದನದಿಂದ ಹೊರ ನಡೆದರು.
ಜಾತ್ಯತೀತತೆ ಸೇರಿದಂತೆ ಪೆರಿಯಾರ್, ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನು ರಾಜ್ಯ ಸರ್ಕಾರ ಭಾಷಣದಲ್ಲಿ ಸಿದ್ಧಪಡಿಸಿತ್ತು. ಆದರೆ ಭಾಷಣದ ಆ ಭಾಗಗಳನ್ನು ಅವರು ಬಿಟ್ಟುಬಿಟ್ಟಿದ್ದಾರೆ.
ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ದ್ರಾವಿಡ ಮಾದರಿಯ ಉಲ್ಲೇಖವನ್ನೂ ಅವರು ಓದಿಲ್ಲ. ರಾಜ್ಯಪಾಲರ ಕ್ರಮ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಎಂಕೆ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.