ಬೆಂಗಳೂರು : ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಜಂಕ್ಷನ್ಗಳಲ್ಲಿ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಸವಾಲಾಗಿದೆ.
ನಿಯಮ ಉಲ್ಲಂಘನೆ ಮಾಡ್ತಿದ್ದರೂ ಹಲವೆಡೆ ಅವರ ಮೇಲೆ ನಿಗಾವಹಿಸುವುದು ಪೊಲೀಸರಿಗೆ ಕಷ್ಟದ ಕೆಲಸವಾಗಿತ್ತು. ಈ ಎಲ್ಲ ಸಮಸ್ಯೆಗೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಐಟಿಎಂ ಸಿಸ್ಟಮ್ ಬಳಕೆಗೆ ಮುಂದಾಗಿದೆ.
ಹೌದು. ಇನ್ಮುಂದೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಟೆಕ್ನಾಲಜಿ ಸ್ಟ್ರೈಕ್ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಕಡಿವಾಣಕ್ಕೆ ಮುಂದಾಗಿದೆ.
ನಗರದ ಜಂಕ್ಷನ್ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಆರಂಭಿಸಿದೆ.