ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ದಂಡ ವಿಧಿಸಿದೆ.
ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್ನಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದೆ.
ಮ್ಯಾನ್ಹ್ಯಾಟನ್ ಅಪಾರ್ಟ್ಮೆಂಟ್ಗಳು ಮತ್ತು ಐಷಾರಾಮಿ ಕಾರುಗಳು ಸೇರಿದಂತೆ ಕೆಲ ಕಂಪನಿಗಳ ಮೇಲಿನ ತೆರಿಗೆಗಳನ್ನು ತಪ್ಪಿಸಿಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಡೊನಾಲ್ಡ್ ಟ್ರಂಪ್ರ ಕಂಪನಿ ತೆರಿಗೆ ವಂಚನೆ ಶಿಕ್ಷೆಗೊಳಗಾಗಿದೆ.
ದಾಖಲೆಗಳನ್ನು ನಕಲು ಮಾಡಿರುವ ಆರೋಪಗಳನ್ನು ಒಳಗೊಂಡಂತೆ ಹಲವು ಆರೋಪಗಳು ಸಾಭೀತಾಗಿದ್ದು, ಟ್ರಂಪ್ ಸಂಸ್ಥೆಯಲ್ಲಿನ ಎರಡು ಕಾರ್ಪೋರೆಟ್ ಘಟಕಗಳು ತೆರಿಗೆ ವಂಚಿಸಿರುವುದಕ್ಕಾಗಿ ದಂಡ ವಿಧಿಸಿ ತೀರ್ಪು ನೀಡಲಾಗಿದೆ.