Publish Date: Thu, 12 Mar 2020 (18:10 IST)
Updated Date: Thu, 12 Mar 2020 (18:12 IST)
ಮದುವೆಯಾಗುವ ಆಸೆ ತೋರಿಸಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
17 ವರ್ಷದ ಹುಡುಗಿ ಹೊಲಕ್ಕೆ ಹೋಗಿದ್ದಳು. ಈ ವೇಳೆ ಪರಿಚಿತನೇ ಆಗಿದ್ದ ಅಪರಾಧಿ ಆಕೆಯನ್ನು ಪುಸಲಾಯಿಸಿ ಮದುವೆಯಾಗೋದಾಗಿ ಹೇಳಿ ಅತ್ಯಾಚಾರ ನಡೆಸಿದ್ದಾನೆ.
ಈ ಕುರಿತು ಕಲಬುರಗಿ ಜಿಲ್ಲೆಯ ಸುಲೇಪೇಠ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿಯ ಅಪರಾಧ ಸಾಬೀತಾದ ಕಾರಣದಿಂದಾಗಿ ಚಿಂಚೋಳಿ ತಾಲೂಕಿನ ಅಡಕಿಮೂಡ ತಾಂಡಾದ ನಿವಾಸಿಗೆ ಐಪಿಸಿ 366 ಪ್ರಕಾರ ಅಪರಾಧಕ್ಕೆ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಹಾಗೂ ಪೋಕ್ಸೋ ಕಾಯ್ದೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಮತ್ತು ನೊಂದ ಬಾಲಕಿಗೆ 75 ಸಾವಿರ ರೂ. ಪರಿಹಾರ ವಿತರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.