Publish Date: Mon, 04 May 2020 (10:48 IST)
Updated Date: Mon, 04 May 2020 (10:50 IST)
ಬೆಂಗಳೂರು : ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮದ್ಯದಂಗಡಿ ಓಪನ್ ಆಗಿದ್ದು, ಎಣ್ಣೆಗಾಗಿ ಮುಗಿಬಿದ್ದವರಿಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.
ಆನೇಕಲ್ ಪಟ್ಟಣದಲ್ಲಿ ಬಾರ್ ಮುಂದೆ ಕ್ಯೂ ನಿಂತ ಮದ್ಯಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಏಟು ನೀಡಿದ್ದಾರೆ ಎನ್ನಲಾಗಿದೆ.
ಹಾಗೇ ರಾಮನಗರದಲ್ಲಿಯೂ ಮದ್ಯದಂಗಡಿ ಓಪನ್ ಆಗಿದ್ದು, ಸಾಮಾಜಿಕ ಅಂತರ ಪಾಲಿಸದಿದ್ದಕ್ಕೆ ರಾಮನಗರ ಪಿಎಸ್ ಐ ಬಾರ್ ಮಾಲೀಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ನಿಯಮ ಉಲ್ಲಂಘಿಸಿದರೆ ಶಾಪ್ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.