Publish Date: Mon, 04 May 2020 (10:00 IST)
Updated Date: Mon, 04 May 2020 (10:01 IST)
ಬೆಂಗಳೂರು: ರಾಜ್ಯದಾದ್ಯಂತ ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ ಪಾನ ಪ್ರಿಯರು ಬಾಟಲಿ ಕೊಳ್ಳಲು ಮುಗಿಬಿದ್ದಿದ್ದಾರೆ.
ಬೆಳಿಗ್ಗೆ 9 ರಿಂದ ಮದ್ಯದಂಗಡಿ ತೆರೆಯಲು ಅವಕಾಶ ಕೊಟ್ಟರೂ ಅದಕ್ಕಿಂತ ಮೊದಲೇ ಪಾನಪ್ರಿಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾಡಿದ್ದ ವೃತ್ತಗಳಲ್ಲಿ ತಮ್ಮ ಬದಲು ತಮ್ಮ ತಮ್ಮ ಚಪ್ಪಲಿ, ಕಲ್ಲು ಇನ್ನಿತರ ವಸ್ತುಗಳನ್ನಿಟ್ಟುಕೊಂಡು ಸ್ಥಳ ಬುಕ್ ಮಾಡಿಕೊಂಡಿದ್ದಾರೆ!
ಇನ್ನು ಕೆಲವೆಡೆ ಮದ್ಯ ಕೊಳ್ಳಲು ಬರುವವರಿಗೆ ಕ್ಯೂ ನಿಲ್ಲುವಾಗ ಬಿಸಿಲಿನಲ್ಲಿ ತೊಂದರೆಯಾಗುವುದು ಬೇಡವೆಂದು ಚಪ್ಪರ ಹಾಕಿ ಸ್ವಾಗತಿಸಲಾಗುತ್ತಿದೆ!