Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಂಪರ್ ಟೊಮೊಟೊ ಬೆಳೆದ ಕಾನ್ಸ್‌ಟೆಬಲ್

ಬಂಪರ್ ಟೊಮೊಟೊ ಬೆಳೆದ ಕಾನ್ಸ್‌ಟೆಬಲ್
ಬೇಲೂರು , ಭಾನುವಾರ, 16 ಜುಲೈ 2023 (16:41 IST)
ಚಿನ್ನದ ಬೆಲೆ ಎನಿಸಿಕೊಂಡಿರೋ ಟೊಮೆಟೊವನ್ನು ಭರ್ಜರಿಯಾಗಿ ಬೆಳೆದು ಪೊಲೀಸ್ ಕಾನ್‌ಸ್ಟೇಬಲ್​​​​​​ ಒಬ್ಬರು ಲಕ್ಷಾಂತರ ರೂ. ಆದಾಯ ಗಳಿಸಿದ್ದಾರೆ. ಬೇಲೂರು ತಾಲೂಕಿನ ಹಳೆಬೀಡು ಹೋಬಳಿ ಬಸ್ತಿಹಳ್ಳಿ ಗ್ರಾಮದ ಬೈರೇಶ್​ ಟೊಮೆಟೊ ಬೆಳೆ ಬೆಳೆದಿದ್ದಾರೆ.. ಬೈರೇಶ್ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿದ್ದಾರೆ. ಇವರು ಒಂದು ಎಕರೆ 6 ಗುಂಟೆ ಜಾಗದಲ್ಲಿ ಟೊಮೆಟೊ ಬೆಳೆದಿದ್ದು, ಈಗಾಗಲೇ 20 ಲಕ್ಷ ರೂ. ಆದಾಯ ಗಳಿಸಿದ್ದಾರೆ. ಬೈರೇಶ್ ಇತ್ತೀಚೆಗೆ ಸಾವಿರ ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದಾರೆ. ಇನ್ನೂ ಸಾವಿರ ಬಾಕ್ಸ್ ಹಣ್ಣಿನ ನಿರೀಕ್ಷೆಯಲ್ಲಿದ್ದಾರೆ.. ಟೊಮೆಟೊ ಬೆಲೆ ಏರಿಕೆ ಹಿನ್ನೆಲೆ ಅಲ್ಲಲ್ಲಿ ಟೊಮೆಟೊ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಅದೇ ರೀತಿ ಪೊಲೀಸ್ ಪೇದೆ ಬೈರೇಶ್ ತೋಟಕ್ಕೂ ಕಳ್ಳರ ಕಾಟ ತಪ್ಪಿಲ್ಲ.. ಕಳ್ಳರು ಈಗಾಗಲೇ ಬೈರೇಶ್ ಹೊಲದಿಂದ ನೂರಾರು ಬಾಕ್ಸ್ ಟೊಮೆಟೊ ಕಳ್ಳತನ ಮಾಡಿದ್ದಾರೆ. ನಂತರ ಎಚ್ಚೆತ್ತುಕೊಂಡ ಅವರು ರಾತ್ರಿಯಿಡೀ ಹೊಲದಲ್ಲಿ ಕಾವಲು ಕಾದು ಟೊಮೆಟೊಗಳನ್ನು ಉಳಿಸಿಕೊಂಡಿದ್ದಾರೆ.. ಉಡುಪಿ, ಮಂಗಳೂರಿನಿಂದ ವರ್ತಕರು ಆಗಮಿಸಿ ಬೈರೇಶ್ ಹೊಲದಿಂದ ಟೊಮೆಟೊ ಖರೀದಿ ಮಾಡುತ್ತಾರೆ. ಮಳೆ ಕೊರತೆ, ರೋಗ ಬಾಧೆ, ಕಳ್ಳರ ಕಾಟದ ನಡುವೆಯೂ ಟೊಮೆಟೊ ಬೆಳೆದು ಭರ್ಜರಿ ಆದಾಯ ಗಳಿಸಿರುವ ಬೈರೇಶ್ ಇತರರಿಗೂ ಮಾದರಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ