Publish Date: Sun, 16 Jul 2023 (16:00 IST)
Updated Date: Sun, 16 Jul 2023 (16:03 IST)
ಕಲಬುರಗಿಯ ವಾಡಿ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕುಖ್ಯಾತ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ.ರಫಿಕ್ ಎಂಬಾತನ ಬಂಧನ ಮಾಡಲಾಗಿದೆ.. ಬಂಧಿತನಿಂದ ಬರೋಬ್ಬರಿ 30 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.ಆರೋಪಿ ರಫಿಕ್ ಕಲಬುರಗಿ, ವಾಡಿ, ಯಾದಗಿರಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ.. ಕದ್ದ ಬೈಕ್‌ಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.. ಖಚಿತ ಮಾಹಿತಿ ಮೇರೆಗೆ ಖದೀಮ ರಫಿಕ್ನನ್ನು ಬಂಧಿಸಿದ್ದಾರೆ.. ಕದ್ದ ಬೈಕ್ ಖರೀದಿಸಿದ್ದ ಸೈಯದ್ ಮತ್ತು ಆರೀಫ್ ಸಹ ಬಂಧನ ಮಾಡಲಾಗಿದೆ.