Publish Date: Sun, 16 Jul 2023 (16:20 IST)
Updated Date: Sun, 16 Jul 2023 (16:25 IST)
ಪತಿ ಸಾವನ್ನಪ್ಪಿದ್ದರೂ ಸಹ ಪತ್ನಿಗೆ ಬೆಂಗಳೂರಿನ ಹೋಮ್ ಕ್ರೆಡಿಟ್ ಲೋನ್ ಕಂಪನಿ ಟಾರ್ಚರ್ ನೀಡುತ್ತಿದೆ.. ಶಾಂತಲಾ ಎಂಬುವರಿಗೆ ಹೋಮ್ ಕ್ರೆಡಿಟ್ ಲೋನ್ ಕಂಪನಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ.. ತುಮಕೂರಿನ ಮಂಜುನಾಥ ನಗರದಲ್ಲಿ ಶಾಂತಲಾರ ಪತಿ ರಾಜೇಂದ್ರ ಸ್ವಾಮಿ ಆಡಿಟ್ ಕೆಲಸ ಮಾಡಿಕೊಂಡಿದ್ರು.. ಆ ಸಮಯದಲ್ಲಿ ಕ್ರೆಡಿಟ್ ಲೋನ್ ಕಂಪನಿಯಿಂದ ಸಾಲ ಪಡೆದಿದ್ದರು.. ಅವರು ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ರು.. ಈಗ ಅವರ ಪತ್ನಿ ಶಾಂತಲಾಗೆ ಹೋಮ್ ಕ್ರೆಡಿಟ್ ಲೋನ್ ಕಂಪನಿಯವರು ಕಿರುಕುಳ ನೀಡುತ್ತಿದ್ದಾರೆ.. ನಿಮ್ಮ ಪತಿ ಲೋನ್ ತೆಗೆದುಕೊಂಡಿದ್ದರು ನೀವು ಸಾಲ ಮರುಪಾವತಿಸಿ ಇಲ್ಲಾ ಪೊಲೀಸರು ಮನೆಗೆ ಬರ್ತಾರೆ ಅಂತಾ ಬೆದರಿಕೆ ಹಾಕ್ತಿದ್ದಾರೆ.
geetha
Publish Date: Sun, 16 Jul 2023 (16:20 IST)
Updated Date: Sun, 16 Jul 2023 (16:25 IST)