Publish Date: Wed, 26 Aug 2020 (16:33 IST)
Updated Date: Wed, 26 Aug 2020 (16:35 IST)
ಟಿಪ್ಪು ಸುಲ್ತಾನ್ ಅವರನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೊಗಳಿರುವುದರಿಂದ ಕಾಂಗ್ರೆಸ್ ಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ.
ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್ ಗುಣಗಾನ ಮಾಡಿದ್ದಾರೆ.
ಹೆಚ್.ವಿಶ್ವನಾಥ್ ಹೇಳಿಕೆ ಪ್ರಸ್ತಾಪಿಸಿ ಬಿಜೆಪಿ ಕಾಂಗ್ರೆಸ್ ಮುಖಂಡರು ಟಾಂಗ್ ಕೊಡಲು ಶುರುಮಾಡಿದ್ದಾರೆ.
ಈಶ್ವರ ಖಂಡ್ರೆ ಮತ್ತು ದಿನೇಶ್ ಗುಂಡೂರಾವ್ ಅವರು ಬಿಜೆಪಿಯ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಡವಾಗಿಯಾದರೂಬಿಜೆಪಿ ನಾಯಕರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಸತ್ಯ ಗೊತ್ತಾಗಿದೆ ಎಂದು ಟೀಕೆ ಮಾಡಿದ್ದಾರೆ.