ಬೆಂಗಳೂರು : ಸಾಮಾನ್ಯವಾಗಿ ಮಕ್ಕಳಿಗೆ ಚಳಿಗಾಲದಲ್ಲಿ ಶೀತ, ಜ್ವರ, ಗಂಟಲು ನೋವು, ಹೊಟ್ಟೆ ನೋವು ಸಮಸ್ಯೆ ಹೆಚ್ಚಾಗಿ ಕಾಡುತ್ತಿರುತ್ತದೆ. ಆದಕಾರಣ ಮಕ್ಕಳ ರೋಗನಿರೋಧಕ ಶಕ್ತ ಹೆಚ್ಚಾಗಲು ಈ ಆಹಾರಗಳನ್ನು ತಿನ್ನಿಸಿ.
*ಎಲ್ಲಾ ಹಣ್ಣುಗಳಲ್ಲಿ ಮತ್ತು ತರಕಾರಿಗಳಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಅವುಗಳಲ್ಲಿ ವಿಟಮಿನ್ ಎ ಮತ್ತು ಸಿ ತುಂಬಿರುತ್ತದೆ.
*ಮೊಸರು ಸೋಂಕು ನಿರೋಧಕ ಏಜೆಂಟ್ ಆಗಿ ಕೆಲಸಮಾಡುತ್ತದೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೆಚ್ಚಿಸುತ್ತದೆ.
*ಪ್ರಾಣಿ ಮೂಲಗಳಿಂದ ಬಂದ ಪ್ರೋಟೀನ್ ಗಳು ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಮೀನು, ಮೊಟ್ಟೆ, ಕೋಳಿ, ಹಾಲು, ಧಾನ್ಯಗಳು, ಸೊಪ್ಪುಗಳು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.