ನವದೆಹಲಿ: ಕೊರೋನಾ ಭಾರತದಲ್ಲಿ ಕಾಲಿಟ್ಟ ತಕ್ಷಣ ಸರ್ಕಾರಗಳು ಶಾಲೆ, ಕಾಲೇಜುಗಳನ್ನು ಬಂದ್ ಮಾಡಲು ನಿರ್ಧರಿಸಿದವು. ಯಾಕೆಂದರೆ ಮಕ್ಕಳಲ್ಲಿ ಸೋಂಕು ರೋಗಾಣುಗಳು ಹರಡುವುದು ಬೇಗ ಎಂಬ ಕಾರಣಕ್ಕೆ.
ಈಗ ಕೊರೋನಾ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಲಾಕ್ ಡೌನ್ ಸಡಿಲಿಕೆಯಾಗಿ ಮರಳಿ ಸಹಜ ಜೀವನಕ್ಕೆ ಮರಳಲು ತಯಾರಿಗಳು ನಡೆಯುತ್ತಿವೆ. ಇಂಗ್ಲೆಂಡ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮುಂದಿನ ತಿಂಗಳಿನಿಂದ ಸುರಕ್ಷತಾ ಕ್ರಮಗಳೊಂದಿಗೆ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ.
ಆದರೆ ಮಕ್ಕಳಲ್ಲಿ ಕೊರೋನಾ ಹರಡುವಿಕೆ ನಾವು ನೀವು ಅಂದುಕೊಂಡ ಹಾಗಲ್ಲ. ಕೊರೋನಾ ಕೇವಲ ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಲ್ಲಿ ಅತೀ ಬೇಗನೇ ಹರಡುವ ಸಾಧ‍್ಯತೆ ಹೆಚ್ಚು ಎಂದು ಅಧ್ಯಯನ ವರದಿಗಳು ಹೇಳುತ್ತಿವೆ. ಇದು ನಾವು ಅಂದುಕೊಂಡಕ್ಕಿಂತಲೂ ಅಪಾಯಕಾರಿ ಎನ್ನುತ್ತವೆ ಸಮೀಕ್ಷೆಗಳು. ಹೀಗಾಗಿ ಶಾಲೆ ಆರಂಭಿಸಲು ಅವರಸಿರುವುದು ಅಪಾಯಕಾರಿಯಾದೀತು ಎಂದು ತಜ್ಞರು ಎಚ್ಚರಿಸುತ್ತಾರೆ.