ಲಾಕ್ ಡೌನ್ ಮೂರನೇ ಹಂತದ ವಿಸ್ತರಣೆ ನಡುವೆ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಸರಕಾರಿ ಕಚೇರಿಗಳು ಕಾರ್ಯನಿರ್ವಹಣೆ ಮಾಡಲಿವೆ.
ಪೂರ್ಣ ಪ್ರಮಾಣದಲ್ಲಿ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಸರಕಾರಿ ಕಚೇರಿಗಳು ಕಚೇರಿ ವೇಳೆ ಫುಲ್ ಓಪನ್ ಆಗಿರುತ್ತವೆ.
ಇನ್ನು ರೆಡ್ ಝೋನ್ ನಲ್ಲಿ ಇರುವ ಮೈಸೂರು, ಬೆಂಗಳೂರು ಸಿಟಿ ಹಾಗೂ ಬೆಂಗಳೂರು ರೂರಲ್ ಏರಿಯಾಗಳಲ್ಲಿ 18 ಇಲಾಖೆಗಳ ಎಲ್ಲಾ ವರ್ಗಗಳ ಎ,ಬಿ,ಸಿ,ಡಿ ದರ್ಜೆ ಅಧಿಕಾರಿಗಳು ಕೆಲಸಕ್ಕೆ ಹಾಜರಾಗಲೇಬೇಕಿದೆ.
ಉಳಿದ ಇಲಾಖೆಗಳ ಶೇ. 33 ರಷ್ಟು ಸ್ಟಾಫ್ ಕೆಲಸಕ್ಕೆ ಬರಬೇಕಿದೆ. ಲಾಕ್ ಡೌನ್ ಹಂತ ಹಂತವಾಗಿ ಸಡಿಲಿಕೆ ಆಗುತ್ತಿರುವಂತೆ ಸರಕಾರ ನೂತನ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ.