Publish Date: Sun, 03 May 2020 (16:21 IST)
Updated Date: Sun, 03 May 2020 (16:24 IST)
ದೇಶದಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನನ್ನು ರಂಜಾನ್ ಮುಗಿಯೋವರೆಗೂ ಮುಂದುವರಿಸಬೇಕು…
ಹೀಗಂತ ಕ್ವಾಜಿಯೊಬ್ಬರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಸರಕಾರದೊಂದಿಗೆ ಸಹಕರಿಸುತ್ತಿದ್ದಾರೆ. ವಕ್ಫ್ ಮಂಡಳಿ ನೀಡಿರುವ ಸಲಹೆಗಳನ್ನು ಪಾಲನೆ ಮಾಡುತ್ತಿದ್ದಾರೆ. ದರ್ಗಾ, ಮಸೀದಿ, ಪ್ರಾರ್ಥನೆ, ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುತ್ತಿಲ್ಲ.
ರಂಜಾನ್ ತಿಂಗಳು ಮುಗಿಯೋವರೆಗೂ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಉಡುಪಿ ಕ್ವಾಜಿ ಅಲ್ ಹಾಜ್ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ಈದ್ ವೇಳೆ ಲಾಕ್ ಡೌನ್ ಸಡಿಲಿಕೆ ಮಾಡಿದರೆ ಕೊರೊನಾ ವೈರಸ್ ರೋಗಿಗಳ ಸಂಖ್ಯೆ ಹೆಚ್ಚಾಗಬಹುದು. ಮಾರುಕಟ್ಟೆಗೆ ಬಹಳಷ್ಟು ಜನರು ಖರೀದಿಗೆ ಮುಂದಾಗುವುದರಿಂದಾಗಿ ಸಾಮಾಜಿಕ ಅಂತರ ಮಾಯವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.