ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟವಾಗಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ಇನ್ನೂ ಸಂಬಳ ಆಗಿಲ್ಲ ಎನ್ನಲಾಗಿದೆ.
ಸಾರಿಗೆ ನಿಗಮಗಳಿಗೆ ಆದಾಯವಿಲ್ಲದ ಹಿನ್ನಲೆ ಈ ತಿಂಗಳ ಸಂಬಳ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೇ ವಿಳಂಬವಾದರೂ ಪೂರ್ತಿ ಸಂಬಳ ಬರುವುದು ಅನುಮಾನ ಎನ್ನಲಾಗಿದೆ.
ಚಾಲಕರು, ನಿರ್ವಾಹಕರಿಗೆ ಶೇ.75ರಷ್ಟು ಸಂಬಳ ನೀಡಿದರೆ, ಅಧಿಕಾರಿಗಳಿಗೆ ಶೇ.50ರಷ್ಟು ಸಂಬಳ ನೀಡಲು ಸಾರಿಗೆ ನಿಗಮ ಚಿಂತನೆ ನಡೆಸುತ್ತಿದೆ.